ಪೋಸ್ಟ್‌ಗಳು

ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನ ಯಾರಿಗಾದರೂ ನೆನಪಿದೆಯೆ?

ಇಮೇಜ್
ಭ್ರಷ್ಟಾಚಾರ ಎನ್ನುವುದು ವ್ಯವಸ್ಥೆಯಲ್ಲಲ್ಲ, ಮನಸ್ಸಿನಲ್ಲಿ ಇರುತ್ತದೆ. ವ್ಯವಸ್ಥೆ ಮನಸ್ಸಿನ ಕನ್ನಡಿ ಮಾತ್ರ. ಮನುಷ್ಯನಿಗೆ ಅಧಿಕಾರ ಸಿಗುವುದು ಅರ್ಹತೆ, ಯೋಗ್ಯತೆ ಮತ್ತು ಅವಕಾಶವಿದ್ದಾಗ. ಕೆಲವೊಮ್ಮೆ ಯಾವುದೂ ಇಲ್ಲದಿದ್ದಾಗಲೂ ಅವಕಾಶ ಸೃಷ್ಟಿಸಿಕೊಳ್ಳಲಾಗುತ್ತದೆ ಭ್ರಷ್ಟಾಚಾರದ ಮೂಲಕ. ಅದು ವ್ಯವಸ್ಥೆಯ ಜೊತೆಗೆ ವ್ಯವಸ್ಥೆಯಲ್ಲಿನ ಆತ್ಮಸಾಕ್ಷಿಯನ್ನೂ ಕೊಲ್ಲುತ್ತದೆ. ಅಸಮಾನತೆ, ಅರಾಜಕತೆ ಮತ್ತು ವ್ಯವಸ್ಥೆಯ ನಾಶಕ್ಕೆ ಕಾರಣವಾಗುತ್ತದೆ. ಯಾವುದೇ ಬಗೆಯ ಅಧಿಕಾರ ಮನುಷ್ಯನ ಅಸಲಿ ಮುಖವನ್ನು ತೋರಿಸುತ್ತದೆ. ಅಂತಹ ಅಸಲಿ ಮುಖಗಳಲ್ಲೊಂದು ಭ್ರಷ್ಟಾಚಾರ. ಭ್ರಷ್ಟಾಚಾರದಲ್ಲಿ ಹಲವು ಬಗೆ. ಮೋಸ, ಸುಳ್ಳು, ವಂಚನೆ, ಹೆದರಿಸುವಿಕೆ, ಬೇಡಿಕೆ ಇಡುವಿಕೆ, ಪ್ರಲೋಭನೆ, ಒತ್ತಡ ತರುವುದು ಇತ್ಯಾದಿ ರೂಪದಲ್ಲಿ ಅದು ಕಾಣಿಸುತ್ತದೆ. ಯಾವುದೇ ವ್ಯವಸ್ಥೆಯಲ್ಲಿ ವ್ಯಕ್ತಿಯೊಬ್ಬ ತನ್ನ ಸಂಪರ್ಕ ಅಥವಾ ಸಂಪನ್ಮೂಲದ ಬಲದಿಂದ ತನಗೆ ಬೇಕಾದುದನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಾದರೆ ಆ ವ್ಯವಸ್ಥೆಯಲ್ಲಿ ಸಮಾನತೆ ಇಲ್ಲವೆಂತಲೇ ಅರ್ಥ. ಇಂತಹ ಅಸಮಾನತೆ ಸೃಷ್ಟಿಸುವ ಯಾವುದೇ ವ್ಯವಸ್ಥೆ ನ್ಯಾಯಯುತ ಬದುಕಿಗೆ ಅಪಾಯವೆ. ಎಲ್ಲಿ ನ್ಯಾಯಯುತ ಬದುಕು ಸಾಧ್ಯವಿಲ್ಲವೊ ಅಲ್ಲಿ ಜನತಂತ್ರ ಸಹ ಸಂಕಷ್ಟದಲ್ಲಿರುತ್ತದೆ. ಈ ಸಂಕಷ್ಟಕ್ಕೆ ಉತ್ತರ ಕಂಡುಕೊಳ್ಳುವಲ್ಲಿ ಚಾಣಕ್ಯನಂತಹ ರಾಜನೀತಿಜ್ಞನೂ ಸಹ ಹೆಣಗಾಡಿದ್ದಕ್ಕೆ ಚರಿತ್ರೆ ಸಾಕ್ಷಿಯಾಗಿದೆ. ಪ್ರಸ್ತುತ ಆಧುನಿಕ ರಾಜಕಾರಣದಿಂದ ಶೈಕ್ಷ

ಶಾಲೆಗಳಲ್ಲಿ ಭಗವದ್ಗೀತೆ – ಬೇಕೊ? ಬೇಡವೊ?

ಇಮೇಜ್
ಶಾಲೆಗಳಲ್ಲಿ ಭಗವದ್ಗೀತೆ ಬೇಕೊ? ಬೇಡವೊ ಎನ್ನುವುದರಲ್ಲಿ ಮೂರು ವಿಚಾರಗಳಿವೆ. ಒಂದು ಇವತ್ತಿನ ಶಾಲೆಗಳು, ಮಕ್ಕಳು ಹೇಗಿದ್ದಾರೆ? ಭಗವದ್ಗೀತೆ ಮತ್ತು ಬೇಕು, ಬೇಡಗಳ ಪ್ರಶ್ನೆ. ಇದೆಲ್ಲವನ್ನೂ ಮೀರಿ ಈ ವಿಚಾರದ ಪ್ರಸ್ತುತತೆ. ಇವುಗಳ ಬಗ್ಗೆ ಒಂದೊಂದಾಗಿ ನೋಡೋಣ. ಶಾಲೆ ಮತ್ತು ಮಕ್ಕಳು – ಇವತ್ತಿನ ಶಾಲೆ ಒಂದು ಕಾರ್ಖಾನೆ. ಇಲ್ಲಿ ಮಕ್ಕಳನ್ನು ಒಂದು ವಸ್ತುವನ್ನಾಗಿ ನೋಡಲಾಗುತ್ತದೆ. ಮಕ್ಕಳು ಇಲ್ಲಿ ಭವಿಷ್ಯದ ಉದ್ಯೋಗಕ್ಕಾಗಿ ಓದಲು ಬರುತ್ತಾರೆಯೇ ಹೊರತು ವ್ಯಕ್ತಿತ್ವ ವಿಕಸನಕ್ಕಲ್ಲ. ಇದು ಹೇಗೆ ನಿರೂಪಿತವಾಗುತ್ತದೆಯೆಂದರೆ ಕರ್ನಾಟಕದ ಸಾವಿರಾರು ಶಾಲೆಗಳು ಆಟದ ತರಗತಿಯನ್ನು ತರಗತಿಯ ವೇಳಾಪಟ್ಟಿಯಲ್ಲಿ ಸೇರಿಸಿವೆ. ಆದರೆ ಬಹುತೇಕ ಶಾಲೆಗಳು ಆಟದ ತರಗತಿಯಲ್ಲೂ ಸಹ ಮಕ್ಕಳಿಗೆ ಆಟಕ್ಕೆ ಬಿಡುವುದಿಲ್ಲ. ವಾಚನಾಲಯ ಇರುತ್ತದೆ. ಆದರೆ ಲೈಬ್ರರಿ ಪಿರಿಯಡ್ ನಲ್ಲಿ ಎಷ್ಟು ಮಕ್ಕಳು ವಾಚನಾಲಯಕ್ಕೆ ಹೋಗಿ ಓದುತ್ತಾರೆ? ಸ್ಪರ್ಧೆಗಳಿರುತ್ತವೆ. ಸ್ಪರ್ಧೆಗಳಲ್ಲಿ ಕೆಲವರು ಯಾವಾಗಲೂ ಭಾಗವಹಿಸುತ್ತಾರೆ. ಅವರಲ್ಲಿ ಕೆಲವರು ಪ್ರತಿಭಾವಂತರಾಗಿರಲಿ, ಬಿಡಲಿ ಬಹುಮಾನ ಪಡೆದೇ ಪಡೆಯುತ್ತಾರೆ. ಹೀಗೆ ಹೆಸರಿಗೆ ಮಾತ್ರ ವ್ಯಕ್ತಿತ್ವ ವಿಕಸನಕ್ಕಾಗಿ ಶಾಲೆ ಎನ್ನುವ ಹಾಗಾಗಿದೆ. ಒಂದು ಕಾಲದಲ್ಲಿ ಶಾಲೆಯ ಆವರಣವನ್ನು ವಾರಕ್ಕೊಮ್ಮೆಯಾದರೂ ಸ್ವಚ್ಛಗೊಳಿಸುವ, ಕೈತೋಟಗಳನ್ನು ಮಾಡುವ, ಮಕ್ಕಳೇ ಬೆಳೆಸಿದ ಹಣ್ಣು, ತರಕಾರಿಗಳನ್ನು ಅವರೇ ತಿನ್ನುವಂತೆ ಮಾಡುವ ಶಾಲೆಗಳು ಯಥೇಚ್ಛವಾಗಿದ್ದ

ಶಾಲಾ ಬ್ಯಾಗಿನಲ್ಲಿ ಕಾಂಡೋಮ್ – ಆಪ್ತಸಮಾಲೋಚನೆ ಯಾರಿಗೆ ಬೇಕು?

  ಬೆಂಗಳೂರಿನ ಪ್ರತಿಷ್ಠಿತ ಶಾಲೆಯೊಂದರ ಹತ್ತನೆ ತರಗತಿಯ ವಿದ್ಯಾರ್ಥಿನಿಯ ಬ್ಯಾಗ್ ನಲ್ಲಿ ಕಾಂಡೋಮ್ ಪತ್ತೆಯಾಗಿದೆ. ಇದು ನಿನ್ನೆನ ಸುದ್ದಿ. ಸಾಮಾಜಿಕ ಮಾಧ್ಯಮದಲ್ಲೆಂತೂ ಇದರ ಬಗ್ಗೆ ಚರ್ಚೆಯೊ ಚರ್ಚೆ. ಇದು ಅನಿರೀಕ್ಷಿತವೇ? ಇದು ಪ್ರಶ್ನೆ. 25 ವರ್ಷಗಳ ಹಿಂದೆ ಹೀಗಿತ್ತಾ? ಯೋಚನೆ ಮಾಡಿದೆ. ಖಂಡಿತ ಇತ್ತು. ಆದರೆ ಹೊರಗೆ ಬರುತ್ತಿರಲಿಲ್ಲ. ನಾನು ಚಿಕ್ಕವಳಿದ್ದಾಗ ನನ್ನದೇ ವಯಸ್ಸಿನ ಕೆಲವು ಹೆಣ್ಣುಮಕ್ಕಳಿದ್ದರು. ಅವರ ಲೈಂಗಿಕ   ಜ್ಞಾನ ಎಷ್ಟಿತ್ತು ಎಂದರೆ ಇವತ್ತು ಕುಳಿತು ಯೋಚಿಸುವಾಗ ಅವರ ಬಗ್ಗೆ ಅಬ್ಬಾ! ಎನಿಸುತ್ತದೆ.. ಒಂದನೇ ತರಗತಿಯಲ್ಲಿದ್ದಾಗ ಒಬ್ಬ ಸಹಪಾಠಿ ಹೇಳುತ್ತಿದ್ದುದು ನೆನಪಿದೆ. ಮಕ್ಕಳಾಗುವ ಸಂಪೂರ್ಣ ಪ್ರಕ್ರಿಯೆ ಹೇಳಿದ್ದಳು. ನನಗೆ ಎಷ್ಟು ಭಯವಾಗಿತ್ತೆಂದರೆ ಆ ಹುಡುಗಿಯ ಬಗ್ಗೆ ಯೋಚಿಸಲೂ ಎಷ್ಟೋ ವರ್ಷ ಭಯ ಪಟ್ಟುಕೊಂಡಿದ್ದೆ. ಇನ್ನು ದೊಡ್ಡವಳಾಗ್ತಾ ಆಗ್ತಾ ಆಗ್ತಾ ಅಂತಹ ಹಲವಾರು ಹುಡುಗಿಯರ ಒಡನಾಟ ಸಿಕ್ಕಿತ್ತು. 7 – 10ನೇ ತರಗತಿ ಕೇವಲ ಪ್ರೇಮಪತ್ರಕ್ಕೆ, ಅದಕ್ಕೆ ಸಂಬಂಧಪಟ್ಟ ಪ್ರಯೋಗಕ್ಕೆ ಮಾತ್ರವಲ್ಲ ಲೈಂಗಿಕತೆಗೆ ಸಂಬಂಧಪಟ್ಟೂ ಪ್ರಯೋಗಗಳು ನಡೆಯುತ್ತಿದ್ದವು. ಕೆಲವು ಶಿಕ್ಷಕರ ಹೆಸರು, ಅಕ್ಕಂದಿರ ಹೆಸರೂ ಕೇಳಿಬರುತ್ತಿತ್ತು. ನನಗಿನ್ನೂ ಹದಿನೆಂಟು ತುಂಬದೇ ಇರುವಾಗ ಅಂತಹ ಒಬ್ಬ ಅಂಕಲ್ಲು ಬಂದು ನಿನ್ನ ಅಕ್ಕ ಎಷ್ಟು ಕೊಪರೇಟ್ ಮಾಡುತ್ತಿದ್ದಳು, ನೀನ್ಯಾಕೆ ಹೀಗೆ ಎಂದು ಕೇಳಿದ್ದರು. ಇವೆಲ್ಲ ಅವತ್ತಿನ ನನ್ನ ಮನೋಭೂಮಿಕೆಯಲ

ಕನ್ನಡವನ್ನು ಕೊಲ್ಲುವ ಕೆಲಸ!

ಇಮೇಜ್
ಹೌದು, ನೀವು ಸರಿಯಾಗಿ ಓದಿದ್ದೀರಿ. ಈ ಕೆಲಸವನ್ನು ಮಾಡುತ್ತಿರುವುದು ಬೇರೆ ಯಾರೂ ಅಲ್ಲ. ಸ್ವತಃ ರಾಜ್ಯ ಶಿಕ್ಷಣ ಇಲಾಖೆ. ಹೇಗೆ? ನೀವು ಈ ವರ್ಷ ಹೊಸದಾಗಿ ಪರಿಷ್ಕೃತಗೊಂಡ 1ನೇ ತರಗತಿಯ ಕನ್ನಡ ಪುಸ್ತಕಗಳನ್ನು ತೆಗೆದುನೋಡಿ. ಇಡೀ ಪುಸ್ತಕದ ಸೃಷ್ಟಿಯೇ ಕನ್ನಡವನ್ನು ಕೊಲೆ ಮಾಡಲೆಂದೇ   ಆಗಿದೆ ಎನ್ನುವಂತೆ ಭಾಸವಾಗುತ್ತದೆ. ಕನ್ನಡದ ಕಾಗುಣಿತ ಕಲಿಸುವ ಮೊದಲೇ ವಂದನೆ ಪದ್ಯ ಶುರುವಾಗುತ್ತದೆ. ಮಗುವಿನ ಕಲ್ಪನೆ ಅಪ್ಪ, ಅಮ್ಮನಿಂದ ಮುಂದೆ ಹೋಗುವ ಮೊದಲೇ ರೈತ, ಯೋಧ, ವೈದ್ಯೆ ಎಲ್ಲಾ ಬರುತ್ತಾರೆ. ಇದರಲ್ಲಿ ತಪ್ಪೇನಿದೆ ಎಂದು ನೀವು ಕೇಳಬಹುದು! ಅಂತೆಯೇ ಕತೆಗಳು, ಹಾಡುಗಳು, ಶಬ್ಧಗಳು ಎಲ್ಲವೂ ಆಗ ತಾನೆ ಶಾಲೆಗೆ ಕಾಲಿಟ್ಟ ಮಗುವಿನ ಎದುರು ಒಮ್ಮೆಲೆ ಪ್ರತ್ಯಕ್ಷವಾಗುತ್ತವೆ. ಅಷ್ಟು ದೊಡ್ಡ ಹಾಡುಗಳು, ಕತೆಗಳನ್ನು ಹೇಳಲು ಕಲಿಯುವುದಷ್ಟೇ ಅಲ್ಲ, ಅದರಲ್ಲಿ ಬರುವ ಶಬ್ಧಗಳು, ಅರ್ಥಗಳು, ಯಾರು ಯಾರಿಗೆ ಯಾವ ಸಂದರ್ಭದಲ್ಲಿ ಹೇಳಿದರು ಎಂದು ಹೇಳುವುದು ಮತ್ತು ಬರೆಯುವುದೂ ಸಹ ಸೇರಿವೆ! ಎಂದರೆ ಇದು ಯಾವ ವಯಸ್ಸಿನ ಮಕ್ಕಳ ಪುಸ್ತಕ ಎಂಬ ಗೊಂದಲಕ್ಕೆ ಬೀಳಿಸುತ್ತದೆ. ಇನ್ನು ಕಾಗುಣಿತ ಕಲಿಸುವಿಕೆಯೂ ದೊಡ್ಡ ಗೊಂದಲ. ಮಗುವಿಗೆ ನೆನಪಿಟ್ಟುಕೊಳ್ಳಲು ಸುಲಭವಾಗುವ ಯಾವುದೇ ತಂತ್ರಗಳು ಇಲ್ಲಿಲ್ಲ. ನೆನಪಿಟ್ಟುಕೊಳ್ಳಲು ಸಹಾಯವಾಗುವ ಸೀಕ್ವೆನ್ಸಿಂಗ್ , ಲಿಂಕಿಂಗ್ ವಿಧಾನಗಳು ಈ ಮೊದಲು ಇದ್ದವು. ಉದಾಹರಣೆಗೆ ಅ, ಆ, ಇ, ಈ ಈ ರೀತಿ. ಈಗ ಅ ಒಮ್ಮೆ ಬಂದರೆ ಆ ಇನ್ನೆಲ್ಲೊ ಬ

ಪ್ರೇಕ್ಷಕ ವರ್ಗವು ಸಿನೆಮಾಗಿಂತಲೂ ಮಿಗಿಲಾದ ನಾಟಕಗಳನ್ನು ಅರ್ಥಮಾಡಿಕೊಂಡು ವಿವೇಚಿಸುತ್ತದೆಯೆ?

  ಕಾಶ್ಮೀರ್ ಪೈಲ್ಸ್ ಚಲನಚಿತ್ರವು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯಂತ ಕೆಟ್ಟಚಿತ್ರ ಮತ್ತು ಪ್ರಚಾರದ ಗಿಮಿಕ್ ಎಂದು ಹೀಗಳೆಯಲ್ಪಟ್ಟಿದೆ. ಯಥಾಪ್ರಕಾರ ಸಮಾಜದ ಒಂದು ಬಣ ನಿರ್ಣಾಯಕರಲ್ಲಿ ಒಬ್ಬ ತನ್ನದೇ ದೇಶದ ಮಾನ ತೆಗೆಯಲು ಹಿಂದು ಮುಂದು ನೋಡದ ವ್ಯಕ್ತಿ. ಆ ವ್ಯಕ್ತಿಯ ಮಾತನ್ನು ಯಾಕೆ ಅಷ್ಟು ಮಹತ್ವದ್ದಾಗಬೇಕು. ಅದೊಂದು ಉತ್ತಮ ಚಿತ್ರವಾಗಿರದಿದ್ದರೆ ಜನರು ಅದನ್ನು ಗೆಲ್ಲಿಸುತ್ತಿದ್ದರೆ? ಎಂದು ಪ್ರತಿಪಾದಿಸುತ್ತಿದ್ದಾರೆ. ಇನ್ನೊಂದು ಬಣ ಭಾರತದಲ್ಲಿ ನಡೆಯುವ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ನಿರ್ಣಾಯಕರನ್ನು ವಿದೇಶಗಳಿಂದ ಆಮಂತ್ರಿಸಲಾಗುತ್ತದೆ. ಖುದ್ದು ಸರ್ಕಾರವೇ ಇವರನ್ನು ನಿಯುಕ್ತಿಗೊಳಿಸುತ್ತದೆ. ಅವರಲ್ಲಿ ಯಾರೊಬ್ಬರು ಇಂತಹ ಚಕಾರಗಳನ್ನೆತ್ತಿದರೆ ತಪ್ಪೇನು? ಸತ್ಯವನ್ನು ಸತ್ಯವೆಂದು ಹೇಳಿದರೆ ಯಾಕೆ ಅಲ್ಲಗಳೆಯಬೇಕು? ಬೊಬ್ಬೆಹೊಡೆಯಬೇಕು? ಈ ಚಲನಚಿತ್ರವೊಂದು ಪಕ್ಷವೊಂದರ ಪ್ರಾಪಗೆಂಡ ಎನ್ನುವುದು ಸಾಬೀತಾಗಿದೆ. ಖುದ್ದು ಪ್ರಧಾನಮಂತ್ರಿಗಳೇ ಈ ಚಲನಚಿತ್ರದ ಮನರಂಜನಾ ತೆರಿಗೆಯನ್ನು ರದ್ದುಗೊಳಿಸಲು ಸೂಚಿಸಿದ್ದಾರೆ. ಒಂದು ಸಿನೆಮಾ ಕಲೆಯ ನೆಲೆಯಲ್ಲಿದ್ದರೆ ಅದು ಸಿನೆಮಾ. ಕಲೆಯ ಹೊರತಾಗಿ ರಾಜಕೀಯ ಉದ್ದೇಶವನ್ನೊಳಗೊಂಡರೆ ಅದು ಪ್ರಾಪಗಂಡವಲ್ಲದೆ ಇನ್ನೇನು? ಸಿಂಗಾಪುರದಲ್ಲಿ ಈ ಸಿನೆಮಾ ಎರಡು ಧರ್ಮಗಳ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತದೆ ಎಂದು ಪ್ರದರ್ಶನಕ್ಕೆ ಅನುಮತಿ ನೀಡಲಿಲ್ಲ. ಹರಿಯಾಣದಲ್ಲೂ ಈ ಸಿನೆಮಾಕ್ಕೆ ತೆರಿಗೆ ರದ

ಪತಿಯ ಆಜ್ಞೆಯನ್ನು ಪತ್ನಿ ಪಾಲಿಸಬೇಕಾ?

ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ಕಾಲಂವೊಂದರ ಶೀರ್ಷಿಕೆ ಇದು. ಇದರಲ್ಲಿ ವೃದ್ಧೆಯೊಬ್ಬಳು ಪಾರ್ವತಿಗೆ ಉಪದೇಶಮಾಡುವ ಸನ್ನಿವೇಶ ಬರುತ್ತದೆ. ಅದರಲ್ಲಿ ಆಕೆ ಗಂಡನೊಂದಿಗೆ ಹೇಗೆ ಇರಬೇಕೆಂದು ಉಪದೇಶಿಸುತ್ತಾಳೆ. 22ನೇ ಶತಮಾನದಲ್ಲೂ ಈ ಉಪದೇಶಗಳ ಪ್ರಸ್ತುತತೆ ಎಷ್ಟು? ಎಂಬ ಅರಿವು ಲೇಖಕರಿಗೆ ಇರಬೇಕಿತ್ತು ಎನ್ನುವುದು ಬಹುತೇಕ ವಾಚಕರ ಅಭಿಪ್ರಾಯ. ಅದೊಂದು ಪತ್ರಿಕಾಧರ್ಮಕ್ಕೇ ಅಪಚಾರ. ಕೋಮು ಭಾವನೆಯನ್ನು ಮೀರಿದ ಎಂದು ಬ್ರ್ಯಾಂಡ್ ಆದ ಜನಪ್ರಿಯ ದಿನಪತ್ರಿಕೆಯಲ್ಲಿ ಈ ರೀತಿಯ ಲೇಖನ ಪ್ರಕಟವಾಗುವುದು ಅಕ್ಷಮ್ಯ ಅಪರಾಧವೆಂತಲೇ ಒಂದು ವರ್ಗ ಪರಿಗಣಿಸಿತು. ಅವರಲ್ಲಿ ಬಹುತೇಕರು ಖುದ್ದು ಪತ್ರಿಕೆಗಳ ಬರಹಗಾರರು, ಲೇಖಕರು, ಸಾಹಿತಿಗಳು ಇನ್ನೂ ಏನೇನೊ. ಅವರು ಒಂದು ಸೂಕ್ಷ್ಮವನ್ನು ಅರಿಯದೇ ಘಟನೆಗೆ ಓವರ್ ರಿಯಾಕ್ಟ್ ಮಾಡಿದರೆಂದು ನನ್ನ ಭಾವನೆ. ವೃತ್ತಪತ್ರಿಕೆಗಳಲ್ಲಿ ಈ ಅಚ್ಚಿಸುವ ಪ್ರಕ್ರಿಯೆ ಕೆಲವೊಮ್ಮೆ ತುರ್ತಾಗಿ ನಡೆಯುತ್ತದೆ. ಸಂಪಾದಕರ ಕಣ್ಣುತಪ್ಪಿ ಮುದ್ರಣಗೊಳ್ಳುತ್ತದೆ. ಇನ್ನು ಕೆಲವೊಮ್ಮೆ ಸುಮ್ಮನೆ ಓದಿ ವಿವೇಚನೆಯನ್ನು ಓದುಗನಿಗೆ ಬಿಡಲಾಗುತ್ತದೆ. ಬಹುಶಃ ಈ ಲೇಖನವನ್ನು ಓದಿ ತಲೆಬರಹ ಮಾತ್ರ ಹೀಗೆ ಕೊಟ್ಟಿರುವುದು ಮೂರನೆಯ ವರ್ಗಕ್ಕೆ ಸೇರಿದ್ದಾಗಿದೆ. ವಿವೇಚನೆಯನ್ನು ಓದುಗನಿಗೆ ಬಿಡಲಾಗಿದೆ. ಈ ಉಪದೇಶ ಇವತ್ತಿಗೆ ಅಪ್ರಸ್ತುತ ಎನ್ನುವವರು ಒಂದು ವಿಷಯವನ್ನು ಗಮನಿಸಬೇಕು. ಪ್ರಸ್ತುತ ಟಿವಿಗಳಲ್ಲಿ ಬರುವ ಜ್ಯೋತಿಷಿಗಳಲ್ಲಿ ಬಹುತೇಕರು ಇಂತಹ